
ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 4545 ಕ್ಲರ್ಕ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದೆ.
ಈ ಮೊದಲು ಜುಲೈ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಈಗ ಜುಲೈ 28ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:-
ಅಭ್ಯರ್ಥಿಗಳ ವಯಸ್ಸು ಜುಲೈ 1, 2023ಕ್ಕೆ 20 ವರ್ಷದಿಂದ 28 ವರ್ಷದೊಳಗೆ ಇರಬೇಕು. ವರ್ಗವಾರು ಮೀಸಲಾತಿಯ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆಯು ಇರುತ್ತದೆ.
ಅರ್ಜಿ ಶುಲ್ಕ:-
ಎಸ್ಸಿ-ಎಸ್ಟಿ/ ಪಿಡಬ್ಲ್ಯೂಬಿಡಿ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕ ಇದೆ.
ಹೆಚ್ಚಿನ ಮಾಹಿತಿಗೆ: https://www.ibps.in ಭೇಟಿ