
How to apply Gruh Lakshmi scheme
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ತುಂಬಾ ಸರಳ ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಒಂದು ಗ್ರಹಲಕ್ಷ್ಮಿ ಯೋಜನೆ ಈ ಗ್ರಹಲಕ್ಷ್ಮಿ ಯೋಜನೆ ಇತ್ತೀಚಿಗೆ ಅನುಷ್ಠಾನಕ್ಕೆ ಬಂದಿದ್ದು ಇದರ ಅರ್ಜಿ ಸಲ್ಲಿಗೆ ಪ್ರಕ್ರಿಯೆ ಪ್ರಾರಂಭವಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ವಿವರಗಳನ್ನು ನೀಡಲಾಗಿದೆ ಮತ್ತು ಅದಕ್ಕೆ ಬೇಕಾದಂತ ಅಗತ್ಯ ದಾಖಲಾತಿಗಳನ್ನು ಕೂಡ ಇಲ್ಲಿ ತಿಳಿಸಲಾಗಿದೆ. ರೇಷನ್ ಕಾರ್ಡ್ ಪ್ರಮುಖವಾದಂತಹ ಒಂದು ದಾಖಲಾತಿ ಆಗಿರುತ್ತದೆ. ನಂತರ ಅದಕ್ಕೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ದ್ವಿತೀಯ ಪ್ರಮುಖ ದಾಖಲೆಗಳು ಆಗಿರುತ್ತವೆ.
ಅರ್ಜಿ ಸಲ್ಲಿಸುವ ವಿಧಾನ ಕೂಡ ತುಂಬಾ ಸರಳವಾಗಿ ಇದೆ ಕೇವಲ ಅರ್ಜಿದಾರರು ತಮ್ಮ ರೇಷನ್ ಕಾರ್ಡ್ ಅಂಕೆಗಳನ್ನು ಈ ಕೆಳಗಿನ ನಂಬರ್ಗೆ 8147500500 ಎಸ್ಎಂಎಸ್ ಮೂಲಕ ಕಳಿಸಬೇಕು. ತದನಂತರ ಸಿಸ್ಟಮ್ ನಿಂದ ಒಂದು ರಿಪ್ಲೈ ಯಾಗಿ ಸಂದೇಶ ಬರುತ್ತದೆ. ಆ ಸಂದೇಶದಲ್ಲಿ ತಿಳಿಸಲಾಗುತ್ತದೆ.
ನೀವು ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಎಲ್ಲಿ? ಯಾವ ಸ್ಥಳದಲ್ಲಿ? ಯಾವ ವೆಬ್ಸೈಟ್ ಮುಖಾಂತರ ಸಲ್ಲಿಸಬೇಕು ಎನ್ನುವುದನ್ನು ಅದರಲ್ಲಿ ನಿಗದಿ ಮಾಡಲಾಗಿರುತ್ತದೆ. ಅದಕ್ಕೆ ತಕ್ಕಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹೋಗುತ್ತಿರುವ ಮನೆಯ ಹೆಣ್ಣುಮಗಳು ಕೈಯಲ್ಲಿ ಕೇವಲ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನ ಪ್ರತಿಗಳನ್ನು ತೆಗೆದುಕೊಂಡು ಹೋಗಬೇಕು.
*ಬಾಪೂಜಿ ಕೇಂದ್ರ
*ಬೆಂಗಳೂರು ಒನ್
*ಗ್ರಾಮವನ್
*ಬಿಬಿಎಂಪಿ ವಾರ್ಡ್ ಕಚೇರಿ
*ಸ್ಥಳೀಯ ನಗರ ಆಡಳಿತ ಸಂಸ್ಥೆಯ ಕಚೇರಿಗಳು
*ಪ್ರಜಾಪ್ರತಿನಿಧಿಗಳ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
8147500500 ಈ ನಂಬರಗೆ ನಿಮ್ಮ ರೇಶನ್ ಕಾರ್ಡ್ ನಂಬರನ್ನು ಸೆಂಡ ಮಾಡಿ.