ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಪ್ರಾಜೆಕ್ಟ್ ಅಸಿಸ್ಟೆಂಟ್, ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಲು ಶುರು ಮಾಡಿ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಿ.
ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಇದೇ ಆಗಸ್ಟ್ 8, 2023 ರಂದು ಬೆಳಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.
ಪ್ರಮುಖ ದಿನಾಂಕಗಳು
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 03/08/2023 ಹಾಗೂ ಸಂದರ್ಶನ ನಡೆಯುವ ದಿನಾಂಕ: ಆಗಸ್ಟ್ 8, 2023 ಬೆಳಗ್ಗೆ 10 ಗಂಟೆಗೆ ಆಗಿರುತ್ತದೆ.
ಆಸಕ್ತರು ಸಂದರ್ಶನ ನಡೆಯುವ ಸ್ಥಳವಾದ ಸಹಾಯಕ ಕಚೇರಿ ನಿರ್ದೇಶಕರು (HQ) ಕೃಷಿನಗರ ಧಾರವಾಡ – 580005 ಕರ್ನಾಟಕ ಇಲ್ಲಿಗೆ ಭೇಟಿ ನೀಡಿ ಸಂದರ್ಶನ ನೀಡಿ.
ಪ್ರಾಜೆಕ್ಟ್ ಅಸಿಸ್ಟೆಂಟ್ (ಹೈಲಿ ಸ್ಕಿಲ್ಡ್ ಸ್ಟಾಫ್)- ಮಾಸಿಕ ವೇತನ ರೂಪಾಯಿ 16,718
ಅಸಿಸ್ಟೆಂಟ್ (ಅನ್‌ಸ್ಕಿಲ್ ವರ್ಕರ್)- ಮಾಸಿಕ ವೇತನ ರೂಪಾಯಿ 12,883, ಈ ಹುದ್ದೆಗಳಿಗೆ 7ನೇ ತರಗತಿ, ಐಟಿಐ ಪಾಸಾಗಿರಬೇಕು.