Search
Close this search box.

UDYOGA MAHITI

ನೇಮಕಾತಿ ಹಗರಣಕ್ಕೆ  ಸಾಕ್ಷಿ ಆಯಿತಾ ಮಹಿಳಾ ವಿಶ್ವವಿದ್ಯಾನಿಲಯ? ಎಷ್ಟು ದುಡ್ಡು ವಂಚಿಸಿದ್ದಾರೆ ಗೊತ್ತಾ?

Facebook
WhatsApp
Telegram

 Women’s University witness to recruitment scam? Do you know how much money has been cheated?

udyogamahiti.com

ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ಎನಿಸಿಕೊಂಡಿರೋ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಂಚನೆ ಆರೋಪ ಕೇಳಿ ಬಂದಿದೆ. ವಿವಿಯಲ್ಲಿ ನೌಕರಿ ಕೊಡಿಸುವುದಾಗಿ ನಕಲಿ ಲೆಟರ್ ಹೆಡ್ ಗಳನ್ನು ಬಳಸಿಕೊಂಡು ಅಮಾಯಕರಿಂದ ಹಣ ಸುಲಿಗೆ ಮಾಡಲಾಗಿದೆ. ಇಂಥ ಗಂಭೀರ ಆರೋಪ ಮಾಡಿದವರು ಸ್ವತಃ ವಿಶ್ವ ವಿದ್ಯಾಲಯದ ಕುಲಪತಿಗಳು. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

ಹೌದು ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳಿಗೆ ನೌಕರಿ ಕೊಡಿಸೋದಾಗಿ ಸಾಕಷ್ಟು ಜನರಿಂದ ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳೆಕಿಗೆ ಬಂದಿದೆ. ಸ್ವತಃ ವಿ. ವಿಯ ಕುಲಪತಿಗಳಾದ ಪ್ರೋ. ತುಳಸಿಮಾಲಾ ವಂಚನೆ ಪ್ರಕರಣವನ್ನ ಬಯಲು ಮಾಡಿದ್ದಾರೆ. ಅಮಾಯಕರಿಗೆ ಕೆಲವರು ನೌಕರಿ ಕೊಡಿಸುವ ಆಮೀಷವೊಡ್ಡಿ ಅವರಿಗೆ ನಕಲಿ ಲೆಟರ್ ಹೆಡ್, ನಕಲಿ ಸಹಿ, ಲಾಂಛನ ಇರುವ ಪತ್ರಗಳನ್ನ ನೀಡಿದ್ದಾರೆ ಎನ್ನುವ ಗಂಭೀರವಾದ
ಆರೋಪವನ್ನು ಕುಲಪತಿ ತುಳಸಿಮಾಲಾ ಮಾಡಿದ್ದಾರೆ.

ಇನ್ನೂ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದ ಯಾವುದೇ ಅಧಿಸೂಚನೆ ಹೊರಡಿಸಿರುವುದಿಲ್ಲ ಮತ್ತು ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲವೆಂದು ಸ್ವತಃ ವಿವಿಯೇ ಪ್ರಕಟಣೆ ನೀಡಿದೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೌಕರಿ ಕೊಡಿಸುವುದಾಗಿ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ಕವರಗಳನ್ನು ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಹಿಂದಿನ ಮತ್ತು ಪ್ರಸ್ತುತ ಕುಲಸಚಿವರು ಮತ್ತು ಸಹಾಯಕ ಕುಲಸಚಿವರ
ಸಹಿಯೊಂದಿಗೆ ಸುಳ್ಳು ಪತ್ರಗಳನ್ನು ನೀಡುತ್ತಿದ್ದಾರೆ. ಈ
ಕುರಿತು ವಿವಿ ಗಮನಕ್ಕೆ ಬಂದಿದ್ದು ಇಂಥ ವ್ಯಕ್ತಿಗಳ ಮೋಸದ
ಜಾಲದ ಬಗೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು
ಎಂದು ಕುಲಸಚಿವ ಪ್ರೊ. ಬಿ. ಎಸ್. ನಾವಿ ಪ್ರಕಟಣೆ
ಹೊರಡಿಸಿದ್ದಾರೆ.

ವಿವಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೆ
ವಿಜಯಪುರ ಎಸ್ ಪಿ ಡಾ. ಹೆಚ್ ಡಿ ಆನಂದಕುಮಾರ್
ಸಹ ಪ್ರತಿಕ್ರಿಯೆ ನೀಡಿದ್ದಾರೆ. ವಂಚನೆಯ ಬಗ್ಗೆ ಅಕ್ಕಮಹಾದೇವಿ ವಿವಿ ಹೊರಡಿಸಿರುವ ಪ್ರಕಟಣೆ ಗಮನಕ್ಕೆ
ಬಂದಿದೆ. ಈ ರೀತಿ ಯಾರೇ ವಂಚನೆಗೆ ಒಳಗಾಗಿದ್ರೆ
ದೂರು ನೀಡಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ
ಹೇಳಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗು
ದೂರು ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಈಗಾಗಲೇ ಕೆಲವರು ನೌಕರಿ ಆಸೆಗೆ ಹಣವನ್ನು
ಕೂಡಾ ಕೊಟ್ಟು ಕುಳಿತಿದ್ದಾರೆ. ಇನ್ನೂ ವರೆಗೂ ವಂಚನೆಗೆ
ಒಳಗಾದವರು ಯಾರೂ ಕೂಡಾ ಠಾಣೆಗೆ ಹೋಗಿ ದೂರನ್ನು
ನೀಡಿಲ್ಲ, ಆದರೆ ಮಹಿಳಾ ವಿವಿಯ ಕುಲಪತಿಗಳು
ಕಾನೂನು ತಜ್ಞರೊಂದಿಗೆ ಮಾತನಾಡಿ ದೂರು ದಾಖಲಿಸಲು ಮುಂದಾಗಿದ್ದಾರೆ.

ಪ್ರಕಟಣೆಯಲ್ಲಿ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ಕವರಗಳನ್ನು ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಹಿಂದಿನ ಮತ್ತು ಪ್ರಸ್ತುತ ಕುಲಸಚಿವರು ಮತ್ತು ಸಹಾಯಕ ಕುಲಸಚಿವರ ಸಹಿಯೊಂದಿಗೆ ಸುಳ್ಳು ಪತ್ರಗಳನ್ನು ನೀಡುತ್ತಿದ್ದಾರೆ ಎಂದು ಬರೆಯಲಾಗಿದೆ. ಹಾಗಿದ್ರೆ ಈ ವಂಚನೆಯನ್ನು ವಿವಿಯಲ್ಲಿ ಇರುವವರೇ ಮಾಡಿದ್ದಾರೋ ಅಥವಾ ಹೊರಗಿನವರು ಮಾಡಿದ್ದಾರೋ ಎಂಬುದು ಗೊಂದಲ ಶುರುವಾಗಿದೆ. ರಾಜ್ಯದ ಏಕೈಕ ಮಹಿಳಾ ವಿವಿಯ ಹೆಸರಲ್ಲಿ ವಂಚನೆ ನಡೆದಿರುವದು ಮತ್ತು ಸಹಾಯಕ ಕುಲಸಚಿವರ ಸಹಿಯೊಂದಿಗೆ ಸುಳ್ಳು ಪತ್ರಗಳನ್ನು ನೀಡುತ್ತಿದ್ದಾರೆ ಎಂದು ಬರೆಯಲಾಗಿದೆ.

ಹಾಗಿದ್ರೆ ಈ ವಂಚನೆಯನ್ನು ವಿವಿಯಲ್ಲಿ ಇರುವವರೇ ಮಾಡಿದ್ದಾರೋ ಅಥವಾ ಹೊರಗಿನವರು ಮಾಡಿದ್ದಾರೋ ಎಂಬುದು ಗೊಂದಲ ಶುರುವಾಗಿದೆ ಮತ್ತು ಇಂತಷ್ಟೇ ದುಡ್ಡು ವಸೂಲಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ರಾಜ್ಯದ ಏಕೈಕ ಮಹಿಳಾ ವಿವಿಯ ಹೆಸರಲ್ಲಿ ವಂಚನೆ ನಡೆದಿರುವದು ಮೇಲ್ನೋಟಕ್ಕೆ ಕಂಡು ಬಂದಿದ್ದು ಮುಂಬರುವ ದಿನಗಳಲ್ಲಿ ಪೋಲಿಸರು ಈ ಪ್ರಕರಣ ಹೇಗೆ ಬೇಧಿಸುತ್ತಾರೆ ಕಾದು ನೊಡೋಣ.

Picture of SOLDIER ANAND

SOLDIER ANAND

ಕನ್ನಡಿಗರಿಗೆ ಹೊಸ ಹೊಸ ಉದ್ಯೋಗಗಳ ಪರಿಚಯ ಮಾಡಿಕೊಡುವ ಮತ್ತು ಸ್ವಾವಲಂಬನೆ ಜೀವನ ನಡೆಸಲು ರಹದಾರಿಯನ್ನು ತೋರಿಸುವ ಒಂದು ಚಿಕ್ಕ ಮಾರ್ಗ ಉದ್ಯೋಗ ಮಾಹಿತಿ

Leave a Comment

Trending Results

Request For Post