ಸೈನಿಕ ಕಲ್ಯಾಣ ಇಲಾಖೆ ಕರ್ನಾಟಕ 14 ಕಲ್ಯಾಣ ಸಂಘಟಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಗಸ್ಟ್ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ವಿಧಾನದಲ್ಲಿ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಗಳಿಂದ 10, 12ನೇ ತರಗತಿ ಪೂರ್ಣಗೊಳಿಸಿರಬೇಕು.
ಅರ್ಹತಾ ಮಾನದಂಡಗಳು:-
10 / 12 ನೇ ತರಗತಿಯಲ್ಲಿ ಉತ್ತೀರ್ಣ
ಸೇವಾ ನಿವೃತ್ತಿ ಪ್ರಮಾಣ ಪತ್ರ
ECHS ಕಾರ್ಡ
ಆಧಾರ್ ಕಾರ್ಡ್
ವಾಸಸ್ಥಾನ ಪ್ರಮಾಣ ಪತ್ರ
ವಯೋಮಿತಿ:-
ಅಭ್ಯರ್ಥಿಗಳ ವಯಸ್ಸು ಆಗಸ್ಟ್ 2, 2023ಕ್ಕೆ ಗರಿಷ್ಠ 50 ವರ್ಷ ಮೀರಿರಬಾರದು.
ವೇತನ:-
ಆಯ್ಕೆಯಾದ ಅಭ್ಯರ್ಥಿಗಳಿಗೆ 21,400-42,000 ಮಾಸಿಕ ವೇತನ ಸಿಗಲಿದೆ. ಜುಲೈ 13, 2023ರಿಂದ ಅರ್ಜಿ ಸಲ್ಲಿಕೆ ಪ್ರಾರಂಭಗೊಂಡಿದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ
ಅರ್ಜಿ ಸಲ್ಲಿಸುವ ವಿಳಾಸ:-
: ಅಧ್ಯಕ್ಷರು ಇಲಾಖಾ ನೇಮಕಾತಿ ಸಮಿತಿ,
ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ
#58, ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ಭವನ
ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ರಸ್ತೆ
ಬೆಂಗಳೂರು – 560025.
ಹೆಚ್ಚಿನ ವಿವರಗಳಿಗೆ ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಯನ್ನು ಸಂಪರ್ಕಿಸಿ. ನೆನಪಿರಲಿ ಅರ್ಜಿಗಳನ್ನು ಆಪ್ಲೈನ್ ಮೂಲಕ ಅಥವಾ ಅಂಚೆ ಮೂಲಕ ವೇ ಕಳುಹಿಸಬೇಕು.
